ದೇಶೀಯ ಶಿಕ್ಷಣ ಪದ್ಧತಿಗಳು

ಸಾಮಾನ್ಯವಾಗಿ, ಪ್ರಾಚೀನ ನಾಗರಿಕತೆಗೆ ಹೆಸರಾದ ಎಲ್ಲ ದೇಶಗಳಲ್ಲೂ ಆಯಾ ದೇಶ, ಕಾಲ ಮತ್ತು ಪರಿಸ್ಥಿತಿಗಳಿಗೆ ಅನುಗುಣವಾಗಿ ತಮ್ಮದೇ ಆದ ಶಿಕ್ಷಣ ಪದ್ಧತಿಗಳನ್ನು ದೇಶೀಯ ಶಿಕ್ಷಣ ಪದ್ಧತಿ ಎಂದು ಕರೆಯುವುದು ವಾಡಿಕೆ. ಕೆಲವು ವೇಳೆ ಅವುಗಳಲ್ಲಿ ಆಧುನಿಕಕಾಲದ ಶಿಕ್ಷಣ ಪದ್ಧತಿಗಳ ಹಲವಾರು ಲಕ್ಷಣಗಳು ಕಂಡುಬರುವುದೂ ಉಂಟು. ಚೀನ, ಭಾರತ, ಗ್ರೀಸ್ ಮತ್ತು ರೋಂ ಮೊದಲಾದ ದೇಶಗಳಲ್ಲಿ ಇಂಥ ಪದ್ಧತಿಗಳು ಚೆನ್ನಾಗಿ ಬೆಳೆದುಬಂದಿದ್ದುವು.

ಚೀನ : ಚೀನ, ಜಗತ್ತಿನ ಅತ್ಯಂತ ಪ್ರಾಚೀನ ದೇಶಗಳಲ್ಲಿ ಒಂದು. ಅಲ್ಲಿನ ಜೀವನ ವಿಧಾನ, ಬದುಕಿನ ಆದರ್ಶಗಳು ಬಹಳ ಹಿಂದೆಯೇ ಆಕಾರ ಪಡೆದು, ಯುಗ ಯುಗ ಕಳೆದರೂ ಬದಲಾವಣೆ ಹೊಂದದೆ ಹಾಗೆಯೇ ನಡೆದು ಬಂದವು. ಕ್ರಿ.ಪೂ. ಆರನೆಯ ಶತಮಾನದಲ್ಲಿದ್ದ ಕನ್‍ಫ್ಯೂಷಸ್ ಮತ್ತು ಲಾವೋ-ಟ್ಸು ಇವರ ವಿಚಾರ ಸರಣಿಯೇ ಜೀವನದ ಇತರ ಕ್ಷೇತ್ರಗಳಂತೆ ಶಿಕ್ಷಣ ಪದ್ಧತಿಗೂ ಆಧಾರವಾಯಿತು. ಕನ್‍ಫ್ಯೂಷಸ್ ಆದರ್ಶ ನಾಗರೀಕನ ಗುಣಗಳನ್ನು ಒತ್ತಿ ಹೇಳಿದ. ಲಾವೋ-ಟ್ಸು ಒಳ್ಳೆಯ ಮಾನವನ ಲಕ್ಷಣಗಳನ್ನು ನಿಷ್ಕರ್ಷಿಸಿದ. ಇವು ಎರಡನೆಯ ಮಹಾಯುದ್ಧದ ಅಂತ್ಯದ ವರೆಗೂ ಅಲ್ಲಿನ ಶಿಕ್ಷಣ ತತ್ತ್ವದ ದೃಷ್ಟಿಯನ್ನು ಪೋಷಿಸಿಕೊಂಡು ಬಂದವು.

ಪ್ರಾಚೀನ ಚೀನದಲ್ಲಿ ಪಾಠಶಾಲೆ ಒಂದು ಸಂಸ್ಥೆಯಾಗಿ ರೂಪುಗೊಂಡಿದ್ದರೂ ಕುಟುಂಬ ಜೀವನ ಎಲ್ಲಕ್ಕೂ ಕೇಂದ್ರವಾಗಿದ್ದ ಮನೆಯೇ ಶಿಕ್ಷಣದ ಸ್ಥಾನವಾಗಿತ್ತು.  ವ್ಯವಹಾರ ಜೀವನಕ್ಕೂ ಗೃಹಕೃತ್ಯಕ್ಕೂ ಸಂಬಂಧಿಸಿದಂತೆ ಎಲ್ಲ ಚಟುವಟಿಕೆಗಳನ್ನೂ ಅಲ್ಲಿಂದಲೇ ಕಲಿಯಬೇಕಾಗಿತ್ತು.  ಬಹುತೇಕ ಎಲ್ಲ ಗ್ರಾಮಗಳಲ್ಲೂ ಒಂದೊಂದು ಶಿಕ್ಷಣ ಸಂಸ್ಥೆ ಇರುತ್ತಿತ್ತು.  ಇದಕ್ಕಾಗಿ ಪ್ರತ್ಯೇಕ ಕಟ್ಟಡಗಳು ಇರಲಿಲ್ಲ ; ಉಪಾಧ್ಯಾಯನ ಮನೆಯಲ್ಲೋ ಹಳೆಯ ಪಗೋಡದಲ್ಲೋ (ದೇವಾಲಯ) ಶ್ರೀಮಂತನೊಬ್ಬನ ಮನೆಯಲ್ಲೋ ಬೇರೆ ಯಾವುದಾದರೂ ಸ್ಥಳದಲ್ಲೋ ಅದು ನಡೆಯುತ್ತಿತ್ತು. ಈ ಪಾಠಶಾಲೆಗಳಲ್ಲಿ ಯಾವುದೇ ಬಗೆಯ ಜೀವನ ವೃತ್ತಿಗೆ ಸಂಬಂಧಿಸಿದಂತೆ ಶಿಕ್ಷಣ ಕೊಡುತ್ತಿರಲಿಲ್ಲ. ಶಿಕ್ಷಣ ಪಡೆಯುತ್ತಿದ್ದವರೆಲ್ಲ ಶ್ರೀಮಂತ ಕುಟುಂಬಗಳ ಬಾಲಕರೇ ಆಗಿರುತ್ತಿದ್ದರು. ಪ್ರಾಥಮಿಕ ಶಿಕ್ಷಣ ಕೇವಲ ಔಪಚಾರಿಕವೂ ತ್ರಾಸದಾಯಕವೂ ಆಗಿರುತ್ತಿತ್ತು. ಏಳನೇಯ ವಯಸ್ಸಿಗೆ ಮಕ್ಕಳು ಪ್ರಾಥಮಿಕ ಪಾಠಶಾಲೆ ಸೇರುತ್ತಿದ್ದವು. ಅದು ದಿನವೂ ಸೂರ್ಯೋದಯದಿಂದ ಸಂಜೆ ಐದರ ವರೆಗೂ ನಡೆಯುತ್ತಿತ್ತು; ಮಧ್ಯೆ ಹತ್ತು ಗಂಟೆಯ ಸಮಯದಲ್ಲಿ ಊಟಕ್ಕೆ ವಿರಾಮ ಸಿಕ್ಕುತ್ತಿತ್ತು. ಅಲ್ಲಿ ನೈತಿಕ ಶಿಕ್ಷಣವೇ ಪ್ರಧಾನವಾಗಿತ್ತು. ಇದರ ಗುರಿ ಮೂಲಭೂತವಾಗಿ ಸಾಮಾಜಿಕ ಎನ್ನಬಹುದು. ಆ ಪರೀಕ್ಷೆಯಲ್ಲಿ ತೇರ್ಗಡೆಯಾದವರನ್ನು ನೇರವಾಗಿ ರಾಜ್ಯಾಡಳಿತ ಶಾಖೆಗಳಲ್ಲಿ ನೇಮಿಸಿಕೊಳ್ಳಲಾಗುತ್ತಿತ್ತು. ಕಂಠಪಾಠ ಮತ್ತು ಅನುಕರಣೆ ಮುಖ್ಯ ಭೋಧನ ಕ್ರಮಗಳಾಗಿದ್ದವು. ಅಕ್ಷರಗಳನ್ನು  ಗಟ್ಟಿಯಾಗಿ ಬಾಯಿಂದ ಹೇಳಿಕೊಂಡು ತಿದ್ದುವುದು ವಾಡಿಕೆಯಾಗಿತ್ತು. ಉಪಾಧ್ಯಾಯ ಹೇಳಿಕೊಟ್ಟಂತೆ ಅದೇ ವೇಗದಲ್ಲಿ, ಎತ್ತರದಲ್ಲಿ ವಿಧ್ಯಾರ್ಥಿಗಳು ಅನುಕರಿಸಿ ಹೇಳಬೇಕಾಗಿತ್ತು. ಧರ್ಮಗ್ರಂಥಗಳ ವ್ಯಾಸಂಗ ಕಡ್ಡಾಯವಾಗಿತ್ತು.  ಪ್ರೌಢ ಶಿಕ್ಷಣದಲ್ಲಿ ಮೂರು ಅಂತಸ್ತುಗಳಿದ್ದವು : (ಅ) ಹಿಸ್ಯೂತ್ಸೈ - ಸ್ನಾತಕ ಪದವಿಗೂ (ಆ) ಚೂಜೆನ್- ಸ್ನಾತಕೋತ್ತರ ಪದವಿಗೂ (ಇ) ಚಿನ್‍ಷೀ - ಮಹಾಪಂಡಿತ ಪದವಿಗೂ ಸಮವೆನಿಸಿದುವು. ಪ್ರೌಢಶಿಕ್ಷಣ ಮುಖ್ಯವಾಗಿ ಶ್ರೀಮಂತವರ್ಗದವರ ಪಾಲಿಗಿದ್ದು ಸರ್ಕಾರದ ಉನ್ನತ ಹುದ್ದೆಗಳೆಲ್ಲ ಅವರಿಗೇ ಲಭಿಸುತ್ತಿದ್ದುವು .
ಭಾರತ : e್ಞÁನಕ್ಕೆ ಪ್ರಾಶಸ್ತ್ಯವಿದ್ದ ಪ್ರಾಚೀನ ಭಾರತ ಶಿಕ್ಷಣದ ಬಗ್ಗೆ ಮಿಕ್ಕಿಲ್ಲ ದೇಶಗಳಿಗಿಂತ ಹೆಚ್ಚಿನ ಆಸಕ್ತಿ ವಹಿಸಿತ್ತು. ಅದರ ಫಲವಾಗಿ ಸುಪ್ರೌಢವೆನ್ನಬಹುದಾದ ಒಂದು ಶಿಕ್ಷಣ ಪದ್ಧತಿ ಇಲ್ಲಿ ರೂಪುಗೊಂಡಿತ್ತು. ಇನ್ನೂ ಕೆಲವು ರೂಪಗಳಲ್ಲಿ ಅದು ಹಾಗೆಯೇ ಉಳಿದುಕೊಂಡು ಬಂದಿರುವುದು ಒಂದು ಹೆಮ್ಮೆಯ ವಿಷಯ.  4000 ವರ್ಷಗಳಷ್ಟು ಹಿಂದಿನ ಕಾಲದ ವೈದಿಕ ಋಷಿಗಳಿಂದ ಆರಂಭವಾಗಿ ಇಂದಿನವರಗೆ ಅನೇಕ ಶ್ರೇಷ್ಟ ಗುರುಗಳ, ಭೋಧಕರ ಪರಂಪರೆಯೇ ನಡೆದುಬಂದಿದೆ. ಶಿಕ್ಷಣದ ಕಲ್ಪನೆ ಕೇವಲ ಅಕ್ಷರ ಕಲಿಕೆಗಾಗಿ ಮಾತ್ರ ಆಗಿರಲಿಲ್ಲ.  ಜೀವನದ ಪರಮಾರ್ಥ ಸಿದ್ಧಿ ಅದರ ಗುರಿಯಾಗಿತ್ತು. ಧರ್ಮ, ಅರ್ಥ, ಕಾಮ. ಮೋಕ್ಷ ಎಂಬ ನಾಲ್ಕು ಮೌಲ್ಯಗಳ ಚೌಕಟ್ಟಿನಲ್ಲಿ ಬಾಳು ಬೆಳೆಯಬೇಕಾಗಿತ್ತಾದರೂ ಎಲ್ಲ ಬಗೆಯ ಕರ್ಮಗಳು ಧರ್ಮದ ಸ್ಥಿರ ಆಧಾರದ ಮೇಲೆ ನಿಂತು, ಮೋಕ್ಷದ ಪರಾಕಾಷ್ಠೆಯನ್ನು ಮುಟ್ಟಬೇಕಾಗಿತ್ತು. ಶಿಕ್ಷಣ ಪದ್ಧತಿ ಇದಕ್ಕೆ ಸಮರ್ಥ ಸಾಧನವಾಗಬೇಕಾಗಿತ್ತು.  

ಸುಮಾರು ಹನ್ನೆರಡನೆಯ ವಯಸ್ಸಿನಲ್ಲಿ  ಬಾಲಕನಿಗೆ ಉಪನಯನ ಸಂಸ್ಕಾರ ನಡೆಯುತ್ತಿತ್ತು. ಬ್ರಾಹ್ಮಣ, ಕ್ಷತ್ರಿಯ, ವೈಶ್ಯ,  ಮತ್ತು ಶೂದ್ರ ಎಂದು ನಾಲ್ಕು ವರ್ಣಗಳಲ್ಲಿ ವ್ಯವಸ್ಥೆಯಾಗಿದ್ದ ಸಮಾಜದಲ್ಲಿ ಬ್ರಾಹ್ಮಣ, ಕ್ಷತ್ರಿಯ ಮತ್ತು ವೈಶ್ಯರು ಇದರ ಅವಕಾಶವನ್ನು ಹೊಂದಿದ್ದರು. ಉಪನಯನದ ತರುವಾಯ, ಬಾಲಕ ತಾನು  ಅಪೇಕ್ಷಿಸಿದ ಗುರುವಿನ ಮನೆಯಲ್ಲೇ ಇದ್ದುಕೊಂಡು ಅಥವಾ ಭಿಕ್ಷಾಟನೆ ಮಾಡಿಕೊಂಡು ಹನ್ನೆರಡು ವರ್ಷಗಳ ಕಾಲ ವಿದ್ಯಾರ್ಜನೆ ಮಾಡುತ್ತಿದ್ದ.  ಇದಕ್ಕೆ ಗುರುಕುಲ ಪದ್ಧತಿ ಎಂದು ಹೆಸರು. ಶಿಕ್ಷಣದ ಆ ಕಾಲವೇ ಬ್ರಹ್ಯ್ಮಚರ್ಯಾಶ್ರಮ. ಇದು ಮುಂದಿನ ಗೃಹಸ್ಥಾಶ್ರಮಕ್ಕೆ ತರಬೇತಿ ಹಂತವಾಗಿತ್ತು.
ವೇದಾಧ್ಯಯನ ಶಿಕ್ಷಣದ ಪ್ರಧಾನ ವಿಷಯವಾಗಿತ್ತು. ವೈದಿಕ ಯುಗದಲ್ಲಿ ಬಾಲಕ ಬಾಲಕಿಯರು ಜತೆಜತೆಯಲ್ಲೇ ವ್ಯಾಸಂಗ ಮಾಡುತ್ತಿದ್ದುದುಂಟು ಅಧ್ಯಾಪಕನೇ  ಶಿಕ್ಷಣದ ಕೇಂದ್ರವಾಗಿದ್ದ. ಬಾಯಿಪಾಠ ಮಾಡಿ ಕಲಿಯುವುದು ವಾಡಿಕೆಯಾಗಿತ್ತು. ಅಧ್ಯಾಪಕನ ಪ್ರವಚನ e್ಞÁನಭೋಧನೆಯ ಕ್ರಮವಾಗಿತ್ತು. ಶಬ್ಧೋಚ್ಚಾರ, ಛಂದಸ್ಸು, ವ್ಯಾಕರಣ, ಯe್ಞÁಚರಣೆಯ ಕ್ರಮ, ಖಗೋಳ ಶಾಸ್ತ್ರ - ಇತ್ಯಾದಿ ವಿಷಯಗಳು ಅಧ್ಯಯನದ ವಿಷಯಗಳಾಗಿದ್ದವು.

ವೇದೋಪನಿಷತ್ತುಗಳ ಕಾಲ ಮುಗಿದ ಮೇಲೆ ಗೃಹಸ್ಥಾಶ್ರಮಕ್ಕೆ ಸಂಬಂಧಿಸಿದ ಸಂಸ್ಕಾರ ಕರ್ಮಗಳಲ್ಲಿ ಶಿಕ್ಷಣ ನೀಡುವುದು ಪ್ರಧಾನವಾಯಿತು.  ಇದರ ಜತೆಗೆ ಷಡ್‍ದರ್ಶನಗಳು, ಮಹಾಕಾವ್ಯಗಳು ಸಂಸ್ಕøತ ಸಾಹಿತ್ಯ- ಇವುಗಳ ಅಧ್ಯಯನವೂ ಸೇರಿತು.

ಬೌದ್ದ ಧರ್ಮ ಪ್ರಚಾರಕ್ಕೆ ಬಂದ ಕಾಲದಲ್ಲಿ ನೀತಿ ನಿಷ್ಠೆಗೆ ಅಗ್ರಸ್ಥಾನ ದೊರಕಿತು. ಬೌದ್ಧ ಸಿದ್ಧಾಂತದ ಜತೆಗೆ ತರ್ಕಶಾಸ್ತ್ರದ ಬೆಳೆವಣಿಗೆಯಾಯಿತು. ಬೌದ್ಧಭಿಕ್ಷುಗಳು, ಜೀವಕಾರುಣ್ಯ ದೃಷ್ಟಿಯಿಂದ ವೇದಶಾಸ್ತ್ರವನ್ನೂ ಜೀವನೋಪಯೋಗಕ್ಕಾಗಿ ಕೆಲವು ಕಸುಬುಗಳನ್ನೂ ಸಾಮಾನ್ಯ ಜನತೆಗೆ ಕಲಿಸುತ್ತಿದ್ದರು. ಪ್ರಾಚೀನ ಭಾರತದ ಶಿಕ್ಷಣಕ್ಕೆ ಸಂಘಾರಾಮ, ಚೈತ್ಯಾಲಯ ಮುಂತಾದ ನೂತನ ಸಂಸ್ಥೆಗಳನ್ನು  ಸೇರಿಸಿ ಶಿಕ್ಷಣವ್ಯವಸ್ಥೆಯನ್ನು ಸಮಾನ ತತ್ತ್ವದೃಷ್ಟಿಯ ಮೇಲೆ ರೂಪಿಸಿ ಬೆಳೆಸಿದ ಕೀರ್ತಿ ಬೌದ್ಧಮತಕ್ಕೆ ಸಲ್ಲುತ್ತದೆ.

ಮುಸಲ್ಮಾನರ ಆಡಳಿತ ಕಾಲದಲ್ಲಿಯೂ ಈ ಪ್ರಾಚೀನ ಶಿಕ್ಷಣ ಪದ್ಧತಿಗಳು ಹಾಗೂ ಹೀಗೂ ಮುಂದುವರಿದುಕೊಂಡು ಬಂದವು. ಮುಸಲ್ಮಾನರು ಭಾರತದಲ್ಲಿ ನೆಲೆ ನಿಂತ ಮೇಲೆ ಅವರು ಮುಕ್ತಾಬ್ ಎಂಬ ಪ್ರೌಢಶಾಲೆಗಳನ್ನೂ ಮದ್ರಸಾಗಳೆಂಬ ಪ್ರೌಢಶಿಕ್ಷಣಸಂಸ್ಥೆಗಳನ್ನೂ ಆರಂಭಿಸಿದರು.

ಬ್ರಿಟಿಷರು ಭಾರತದಲ್ಲಿ ನೆಲಸುವ ವೇಳೆಗೆ ಇಲ್ಲಿ ಮೂರು ಪದ್ಧತಿಗಳೂ ಅಸ್ತಿತ್ವದಲ್ಲಿದ್ದವು.
ಶಿಕ್ಷಣ ಸರ್ಕಾರದ ನೇರ ಹೊಣೆಗಾರಿಗೆ ಸೇರದಿದ್ದರೂ ಹಿಂದೂ ಮತ್ತು ಮುಸ್ಲಿಂ ದೊರೆಗಳು ಸಾಮಾನ್ಯವಾಗಿ ಈ ಸಂಸ್ಥೆಗಳಿಗೆ ನೆರವು ನೀಡುತ್ತಿದ್ದರು.  ಶ್ರೀಮಂತರೂ ಸಹಾಯ ನೀಡುವುದು ತಮ್ಮ ಕರ್ತವ್ಯವೆಂದು ಭಾವಿಸಿದ್ದರು.
ಪ್ರತಿಯೊಂದು ಕುಟುಂಬದಲ್ಲೂ ಅದಕ್ಕೆ ವಿಶಿಷ್ಟವಾದ ವೃತ್ತಿ ಅಥವಾ ಕಸಬಿನ ಶಿಕ್ಷಣವನ್ನು ತಂದೆಯೋ ಅಣ್ಣನೋ ಕಸಬನ್ನು ಚೆನ್ನಾಗಿ ಬಲ್ಲ ಇತರರೋ ನೀಡುತ್ತಿದ್ದರು.

ರಾಜ ಮಹಾರಾಜರು ಶಿಕ್ಷಣ ಸಂಸ್ಥೆಗಳಿಗೆ ದಾನ ದತ್ತಿಗಳನ್ನೂ ನೀಡಿದ್ದರೂ ಅದರ ಮೇಲೆ ಯಾವ ತಮ್ಮ ಹತೋಟಿಯನ್ನೂ ಇಟ್ಟಿರಲಿಲ್ಲ. ಶಿಕ್ಷಣ ಸಂಸ್ಥೆಗಳು ಸ್ವತಂತ್ರವಾಗಿ, ಮುಕ್ತ ವಾತವರಣದಲ್ಲಿ ಕೆಲಸ ಮಾಡುತ್ತಿದ್ದವು. ಶಿಕ್ಷಣ ನೀಡುತ್ತಿದ್ದ ಗುರುಗಳು ತಮ್ಮ ಕಾರ್ಯಕ್ಕೆ ಯಾವುದೇ ಬಗೆಯ ವೇತನ ತೆಗೆದುಕೊಳ್ಳುವುದು ಅವಮಾನವೆಂದು ಭಾವಿಸಿದ್ದರು. ಅವರಿಗೆ ಅಪಾರ ಗೌರವ ದೊರಕುತ್ತಿತ್ತು.

ಗ್ರೀಸ್ : ಗ್ರೀಸ್ ಮತ್ತು ರೋಮ್ ದೇಶಗಳು ಪ್ರಾಚೀನ ಪಾಶ್ಚಾತ್ಯ ನಾಗರಿಕತೆಯ ಜ್ವಲಂತ ನಿದರ್ಶನಗಳು. ಅವು ಆಧುನಿಕ ಯುರೋಪಿನ ವಿಚಾರ ಪರಂಪರೆಯ ಉಗಮ ಸ್ಥಾನವೆನ್ನಬಹುದು. ಇವೆರಡು ಜನಾಂಗಗಳ ಆದರ್ಶ, ಜೀವನದೃಷ್ಟಿ, ಕಾರ್ಯಸ್ವರೂಪ ಭಿನ್ನವಾಗಿದ್ದವು. ಗ್ರೀಕರು ಕಲೆ, ಸಾಹಿತ್ಯ, ತತ್ತ್ವe್ಞÁನ, ವಿe್ಞÁನ, ಮತ್ತು ರಾಜಕಾರಣಗಳಲ್ಲಿ ಆಸಕ್ತರಾಗಿದ್ದರು. ರೋಮನರು ಪ್ರಧಾನವಾಗಿ  ಕಾರ್ಯನುಷ್ಠಾನಪರರಾಗಿದ್ದು ವಾಸ್ತು ಶಿಲ್ಪ, ಶಾಸನ, ಮತ್ತು ಪ್ರಭುತ್ವ ಇವನ್ನು ಒಲಿದಿದ್ದರು. ಈ ಭಿನ್ನಜೀವನ ದೃಷ್ಟಿ ಅವರ ಶಿಕ್ಷಣ ಪದ್ಧತಿಗಳ ಮೇಲೆ ಪರಿಣಾಮ ಬೀರಿತು.
ಗ್ರೀಕರ ಶಿಕ್ಷಣ ವಿಚಾರ ಹೋಮರನ ಇಲೀಯಡ್ ಮತ್ತು ಆಡಿಸಿ ಮಹಾಕಾವ್ಯಗಳಲ್ಲೂ ಸಾಕ್ರಟೀಸ್, ಪ್ಲೇಟೊ ಮತ್ತು ಅರಿಸ್ಟಾಟಲ್ ಇವರ ಗ್ರಂಥಗಳಲ್ಲೂ ಪ್ರತಿಬಿಂಬಿಸಿದೆ.

ಸ್ಪಾರ್ಟನ್ ನಗರರಾಜ್ಯದಲ್ಲಿ ವ್ಯಕ್ತಿಯ ಶಿಕ್ಷಣವೆಲ್ಲ ರಾಜ್ಯ ರಕ್ಷಣೆಯ ದೃಷ್ಟಿಯಿಂದ ಏರ್ಪಟ್ಟಿತು. ಎಲ್ಲ ಗಂಡುಮಕ್ಕಳೂ ಸಮರ ಯೋಧರಂತೆ ತರಬೇತಿ ಪಡೆಯಬೇಕಾಗಿತ್ತು. e್ಞÁನಸಾಧನೆಗೆ ಪ್ರತಿಯಾಗಿ ಆದರ್ಶ ಯೋಧನ ಸೃಷ್ಟಿಗೆ ಸರ್ವಸಾಮಥ್ರ್ಯವನ್ನು ಉಪಯೋಗಿಸಲಾಗಿತ್ತು. ಸ್ಪಾರ್ಟಾದ ಕಠೋರ ಶಿಸ್ತು ಇಂದಿಗೂ ಉಲ್ಲೇಖನೀಯ. ದೈಹಿಕ ಶಿಕ್ಷಣ ಮತ್ತು ಸೈನಿಕ ಶಿಕ್ಷಣಗಳಿಗೆ ಆದ್ಯಗಮನ ನೀಡಲಾಗಿತ್ತು. ಬೌದ್ಧಿಕ.

ಶಿಕ್ಷಣಕ್ಕೆ ಕಡಿಮೆ ಗಮನ ನೀಡಲಾಗಿತ್ತು ರಾಜ್ಯಕ್ಕೆ ನಿಷ್ಠೆಯಿಂದ ನಡೆಯಲು ಅನುಕೂಲವಾಗುವಂತೆ ನೈತಿಕ ಮತ್ತು ಸಾಮಾಜಿಕ ಅಭ್ಯಾಸಗಳನ್ನು ಕಲಿಸಲಾಗುತ್ತಿತ್ತು. ಸ್ತ್ರೀಯರ ಶಿಕ್ಷಣವೂ ಇದೇ ಉದ್ದೇಶಗಳಿಂದ ಕೂಡಿತ್ತು. ಅವರು ಆರೋಗ್ಯವಂತರೂ ದೃಢಕಾಯರೂ ಶಕ್ತಿವಂತರೂ ಆದ ಮಕ್ಕಳನ್ನು ಹಡೆದು  ದೇಶಕ್ಕೆ ಕಾಣಿಕೆ ಸಲ್ಲಿಸಬೇಕಾಗಿತ್ತು. ವಾಗ್ಮಿತೆ ಸಂಗೀತ ಮತ್ತು ನೃತ್ಯಗಳನ್ನು ಕಲಿಸುತ್ತಿದ್ದರು.

ಶಿಕ್ಷಣ, ಕುಟುಂಬ ಜೀವನ, ವಿವಾಹ- ಇವುಗಳ ಮೇಲೆ ಪ್ರಭುತ್ವ ಹತೋಟಿಯನ್ನು ಇಟ್ಟುಕೊಂಡಿತ್ತು. ಬಾಲಕ ಏಳು ವರ್ಷಗಳ ವರಗೆ ತಾಯಿಯ ಲಾಲನೆ  ಪೋಷಣೆಗಳಲ್ಲಿದ್ದು ಅನಂತರ ಹದಿನೆಂಟನೆಯ ವಯಸ್ಸಿನ ವರಗೆ ಸೈನಿಕ ಶಿಬಿರದಲ್ಲಿ ಶಿಕ್ಷಣ ಪಡೆಯಬೇಕಾಗಿತ್ತು. ಕತ್ತಲಲ್ಲಿ ಒಬ್ಬನೇ ಮಲಗಿ ಭಯಮುಕ್ತನಾಗಬೇಕಾಗಿತ್ತು. ಸರಳ ಜೀವನ, ಮಿತಾಹಾರ, ನೆಲದ ಮೇಲೆ ನಿದ್ರೆ - ಇಂಥ ಕಠಿಣ ಶಿಸ್ತಿನ ಜೀವನ ನಡೆಸಬೇಕಾಗಿತ್ತು. ಕ್ರೀಡೆ, ಶಾರೀರಕ ವ್ಯಾಯಾಮ, ಕುಸ್ತಿ, ನೆಗೆತ, ಓಟ, ಈಟಿಯ ಎಸೆತ ಇತ್ಯಾದಿಗಳನ್ನು  ಕಲಿಸಲಾಗುತ್ತಿತ್ತು. ಹಿರಿಯರ ಬಗೆಗೆ  ಗೌರವವನ್ನು ಬೆಳೆಸಲಾಗುತ್ತಿತ್ತು.  ಹದಿನೆಂಟರಿಂದ ಇಪ್ಪತ್ತರ ವರಗೆ ಯೋಧವೃತ್ತಿಯ ನೇರ ಶಿಕ್ಷಣ ಕೊಡಲಾಗುತ್ತಿತ್ತು. ಇಪ್ಪತ್ತರ ತರುವಾಯ ಯುದ್ಧ ಕಾರ್ಯದಲ್ಲೇ ತೊಡಗಬೇಕಾಗುತ್ತಿತ್ತು. ಮೂವತ್ತಕ್ಕೆ ಪ್ರತಿ ವ್ಯಕ್ತಿಯೂ ಸ್ವತಂತ್ರನಾಗುತ್ತಿದ್ದ. ಆಗ ಅವನಿಗೆ ಬಲತ್ಕಾರವಾಗಿ ವಿವಾಹ ಮಾಡಿ, ರಾಜ ಕಾರ್ಯದಲ್ಲಿ ತೊಡಗಿಸಲಾಗುತ್ತಿತ್ತು.

ಆತೆನ್ಸಿನ ಶಿಕ್ಷಣಕ್ರಮ ಸ್ಪಾರ್ಟಾದ ಶಿಕ್ಷಣಕ್ರಮದಿಂದ ಭಿನ್ನವಾಗಿತ್ತು. ಅಲ್ಲಿ ವ್ಯಕ್ತಿಯ ಸರ್ವಾಂಗೀಣ ಬೆಳವಣಿಗೆಗೆ ದೈಹಿಕ, ಮಾನಸಿಕ ಮತ್ತು ಸಾರ್ವಜನಿಕ ಉಪಯುಕ್ತ ವಿದ್ಯೆಗಳು - ಇವಕ್ಕೆ ಗಮನ ಕೊಡಲಾಗುತ್ತಿತ್ತು. 

ಸಂಗೀತ, ನೃತ್ಯ ಮತ್ತು ಕಾವ್ಯ ರಚನೆಗಳಲ್ಲಿ ತರಬೇತಿ ನೀಡಿದರೂ ಬೌದ್ಧಿಕ ಮತ್ತು ನೈತಿಕ ಶಿಕ್ಷಣಕ್ಕೂ ಪ್ರಾಧಾನ್ಯವಿತ್ತು,  ತರಗತಿಯ ಶಿಕ್ಷಣ ಪುರುಷರಿಗೆ ಸೀಮಿತವಾಗಿತ್ತು; ಸ್ತ್ರೀಯರಿಗೂ ಗುಲಾಮರಿಗೂ ಅವಕಾಶವಿರಲಿಲ್ಲ. ವೃತ್ತಿಶಿಕ್ಷಣವನ್ನು ಉಪೇಕ್ಷಿಸಲಾಗಿತ್ತು.

ಅಕ್ಷರಭ್ಯಾಸದಿಂದ ಓದು ಮತ್ತು ಬರೆಹದ ಕಲಿಕೆ ಆರಂಭವಾಗುತ್ತಿತ್ತು. ವ್ಯವಹಾರಕ್ಕೆ ಸಾಕಾಗುವಷ್ಟು ಗಣಿತವನ್ನು ಕಲಿಸಲಾಗುತ್ತಿತ್ತು. 
ಜಿಗಿಯುವುದು, ಕುಸ್ತಿ, ಈಟಿಯ ಎಸೆತ, ಚಕ್ರದ ಎಸೆತ ಜತೆಗೆ ಈಜುವುದು ಮುಂತಾದ ಕ್ರೀಡೆಗಳಿಗೆ ಪ್ರಾಶಸ್ತ್ಯವಿತ್ತು. ಬಾಲಕ, ಪ್ರಜಾಸತ್ತಾತ್ಮಕ ರಾಜ್ಯದ ಪ್ರಜೆಯಾಗಿ ತನ್ನ ಭಾಗದ ಕರ್ತವ್ಯವನ್ನು ನಿರ್ವಹಿಸಲು ಹಾಗೂ ಯೋಧನಾಗಿ ವ್ಯವಹಾರಕುಶಲಿಯಾಗಿ ಬಾಳಲು ಅಗತ್ಯವಾದ ಅಂಶಗಳನ್ನು ಕಲಿಸುತ್ತಿದ್ದರು.

ಶಿಕ್ಷಣ ವಿಚಾರಕ್ಕೆ  ಭಾರತೀಯರಂತೆ  ಗ್ರೀಕರೂ ಮಹತ್ತರ ಕೊಡುಗೆ ನೀಡಿದ್ದಾರೆ. ಸಾಕ್ರೆಟಿಸ್ ಯಾವುದೇ ಶಿಕ್ಷಣ ಸಂಸ್ಥೆಯನ್ನು ಸ್ಥಾಪಿಸಿ ವಿದ್ಯೆ ಅರುಹದಿದ್ದರೂ ಅವನು ಕುಳಿತಲ್ಲಿ ನಿಂತಲ್ಲಿ ಜನರನ್ನು ಸಂಭಾಷಣೆಗೆ ತೊಡಗಿಸಿ, ಅವರಲ್ಲಿ e್ಞÁನೋದಯವಾಗುವಂತೆ ಮಾಡುತ್ತಿದ್ದ. ವಿಧಾನವೀಗ ವೈಚಾರಿಕ ಪದ್ಧತಿ (ಡಯಾಲೆಕ್ಟಿಕಲ್ ವಿಧಾನ) ಎಂದು ಶಿಕ್ಷಣತಜ್ಞರ ಮನ್ನಣೆ ಗಳಿಸಿದೆ.

ರೋಮನರ ಶಿಕ್ಷಣದ ಗುರಿ, ಆರಂಭದಲ್ಲಿ ನೈತಿಕ ಮತ್ತು ವ್ಯಾವಹಾರಿಕ ಸ್ವರೂಪದ್ದಾಗಿತ್ತು. ಗೃಹಜೀವನ, ನಾಗರಿಕತೆ, ಪೂರ್ವಜರ ಸಂಸ್ಕøತಿ ಪರಂಪರೆ -  ಇವುಗಳ ಪರಿಚಯಕ್ಕೆ ಪ್ರಾಧಾನ್ಯ ನೀಡಲಾಗಿತ್ತು. ಕಲಿಯಲು ಮೊದಲು ಪುಸ್ತಕ ಮಾಧ್ಯಮವಾಗಿರಲಿಲ್ಲ. ವೀರಗಾಥೆ, ಧಾರ್ಮಿಕ ಗೀತೆ ಮುಂತಾದವನ್ನು ಹಾಡಿ ನೆನಪಿನಲ್ಲಿ ಇಟ್ಟುಕೊಳ್ಳುವುದೇ ವ್ಯಾಸಂಗ ವಿಧಾನವಾಗಿತ್ತು. ತಂದೆ ಕುಟುಂಬದ ಪ್ರಧಾನ ವ್ಯಕ್ತಿಯಾಗಿ ಎಲ್ಲವನ್ನೂ ಕಲಿಸುತ್ತಿದ್ದ.

ಕ್ರಮೇಣ ಗ್ರೀಕರಿಂದ ಪ್ರಭಾವಿತರಾಗಿ ರೋಮನರು ತಮ್ಮ ಶಿಕ್ಷಣ  ವಿಧಾನವನ್ನು ವ್ಯವಸ್ಥೆಗೊಳಿಸಿಕೊಂಡು ಅದರ ವಿವಿಧ ಸ್ತರಗಳಿಗೆ ರೂಪನ್ನಿತ್ತರು, ಏಳರಿಂದ ಹತ್ತನೆಯ ವಯಸ್ಸಿನವರಗೆ ಪ್ರಾಥಮಿಕ ಶಿಕ್ಷಣ; ಹತ್ತರಿಂದ ಹದಿನಾರರ ವರಗೆ ಮಾಧ್ಯಮಿಕ ಶಿಕ್ಷಣ ; ಅದರ ತರುವಾಯ ಎರಡು ಮೂರು ವರ್ಷಗಳ ಉಚ್ಚ ಶಿಕ್ಷಣ - ಈ ರೀತಿ ಅದು ವ್ಯವಸ್ಥೆಯಾಯಿತು. ಹದಿನಾರರ ತರುವಾಯ ಇನ್ನೂ ಉಚ್ಚಶಿಕ್ಷಣ ಪಡೆಯಲು ಬಯಸತಕ್ಕವರು ಆತೆನ್ಸ್ ಅಲೆಕ್ಸಾಂಡ್ರಿಯಾ ಇತ್ಯಾದಿ ಕಡೆಗಳಿಗೆ ಹೋಗಬೇಕಾಗಿತ್ತು.
ಪ್ರಾಥಮಿಕ ಶಿಕ್ಷಣ ಕೇವಲ ಅಕ್ಷರಭ್ಯಾಸದಿಂದ ಕೂಡಿತ್ತು. ಓದು, ಬರೆಹ, ಸರಳ ಲೆಕ್ಕ- ಇಷ್ಟನ್ನೇ ಅಲ್ಲಿ ಕಲಿಯುತ್ತಿದ್ದುದು. ಈ ಹಂತದಲ್ಲಿ ಬಾಲಕ ಬಾಲಕಿಯರು ಜೊತೆಗೂಡಿ ಕಲಿಯುತ್ತಿದ್ದರು. ಮಾಧ್ಯಮಿಕ ಶಿಕ್ಷಣ ಕಾಲದಲ್ಲಿ ಬಾಲಕರು ಮಾತ್ರ ಕಲಿಯುತ್ತಿದ್ದರು. ಈ ಹಂತದಲ್ಲಿ ವ್ಯಾಕರಣ ಪ್ರಧಾನ ಕಲಿಕೆಯ ವಿಷಯವಾಗಿತ್ತು. ಬರೆಹ ಮತ್ತು ವಾಗ್ಮೀತೆಗಳನ್ನು ಕಲಿಯಲು ಪರಿಣತರ ಮೇಲ್ಪಂಕ್ತಿಯನ್ನು ಅನುಸರಿಸುತ್ತಿದ್ದರು. ಭೂಗೋಳ, ಇತಿಹಾಸ, ಪ್ರಕೃತಿ ವಿe್ಞÁನ ಇತ್ಯಾದಿಗಳನ್ನು ಕೇವಲ ಹೆಸರಿಗೆ ಮಾತ್ರ ಕಲಿಸಲಾಗುತ್ತಿತ್ತು. ವ್ಯಾಯಾಮ ಮತ್ತು ನೃತ್ಯಗಳನ್ನು ಕಲಿಸುತ್ತಿರಲಿಲ್ಲ. ವಕ್ತøತ್ವವನ್ನು ಕಲಿಸುವಾಗ ಧ್ವನಿಯನ್ನು ಉತ್ತಮ ಪಡಿಸುವ ಸಾಧನವಾಗಿ ಸಂಗೀತವನ್ನು ಉಪಯೋಗಿಸಲಾಗುತ್ತಿತ್ತು.

ಉಚ್ಚ ತರಗತಿಯಲ್ಲಿ ಆಶು ಭಾಷಣ, ಚರ್ಚೆಗಳನ್ನು ಉತ್ತಮಪಡಿಸುವುದೊಂದೇ ಗುರಿಯಾಗಿತ್ತು. ಕಾನೂನು, ವೈದ್ಯ, ಶಿಲ್ಪ, ಯಂತ್ರe್ಞÁನಗಳಲ್ಲಿ ವೃತ್ತಿಶಿಕ್ಷಣ ನೀಡುವುದು ವಾಡಿಕೆಯಾಗಿತ್ತು. ಗ್ರೀಕರು ತತ್ತ್ವ ವಿಷಯವನ್ನು ಪರಮ ಬೌದ್ಧಿಕ ವಿಷಯವೆಂದು ಪರಿಗಣಿಸಿದ್ದರೆ ರೋಮನರು ವೈದ್ಯಶಾಸ್ತ್ರ ಮತ್ತು ಕಾನೂನುಗಳನ್ನು ಪರಮವೆಂದು ಪರಿಗಣಿಸಿದ್ದರು.

ಪ್ರಾಥಮಿಕ ಹಂತದಲ್ಲಿ ಬಾಲಕರು ನೆಲದ ಮೇಲೋ ಕಲ್ಲುಬೆಂಚುಗಳ ಮೇಲೋ ಕೂರುತ್ತಿದ್ದರು. ಪಾಠಶಾಲೆ ಸೂರ್ಯೋದಯದಿಂದ ಸೂರ್ಯಾಸ್ತದ ವರೆಗೂ ನಡೆಯುತ್ತಿತ್ತು. ಬೇಸಗೆ ಕಾಲದಲ್ಲಿ ಪಾಠಶಾಲೆ ನಡೆಯುತ್ತಿರಲಿಲ್ಲ. ಬರೆಹ ಕಲಿಸಲು ಗ್ರೀಕರ ಸಾಧನ ವಿಧಾನವನ್ನೇ ಉಪಯೋಗಿಸಲಾಗುತ್ತಿತ್ತು. ಹರಳು ಅಥವಾ ಬೆರಳುಗಳನ್ನು ಉಪಯೋಗಿಸಿ, ಎಣಿಕೆ ಕಲಿಸಲಾಗುತ್ತಿತ್ತು. ಶಿಸ್ತು ಕಠೋರವಾಗಿತ್ತು. ದಂಡವನ್ನೂ ಚಾಟಿಯನ್ನೂ ಧಾರಾಳವಾಗಿ ಉಪಯೋಗಿಸುತ್ತಿದ್ದರು.

ಮಾಧ್ಯಮಿಕ ಹಂತದಲ್ಲಿ ಸಂಗ್ರಹಕಥನ ವಾಕ್ಯರಚನೆ ಕವನರಚನೆ ಮೊದಲಾದವುಗಳಿಗೆ ವಿಶೇಷ ಗಮನ ಕೊಡಲಾಗುತ್ತಿತ್ತು. 
(ಜಿ.ಪಿ.ಎನ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ